Widgets Magazine

ದೇಶೀಯ ವಿಮಾನ ಯಾನ ಆರಂಭಕ್ಕೆ ದಿನಾಂಕ ಫಿಕ್ಸ್

ನವದೆಹಲಿ| Krishnaveni K| Last Modified ಗುರುವಾರ, 21 ಮೇ 2020 (10:12 IST)
ನವದೆಹಲಿ: ಕೊರೋನಾದಿಂದಾಗಿ ಸ್ತಬ್ಧವಾಗಿ ಉಕ್ಕಿನ ಹಕ್ಕಿಗಳ ಕಲರವ ಮತ್ತೆ ಶುರುವಾಗಲಿದೆ. ಮೇ 25 ರಿಂದ ದೇಶೀಯ ವಿಮಾನ ಯಾನ ಆರಂಭವಾಗಲಿರುವುದಾಗಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

 
ಮೇ 25 ರಿಂದ ದೇಶದೊಳಗೇ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡುವುದಾಗಿ ಸಚಿವರು ಹೇಳಿದ್ದಾರೆ. ಇದರೊಂದಿಗೆ ಎರಡು ತಿಂಗಳ ಬಳಿಕ ವಿಮಾನಗಳ ಹಾರಾಟ ಶುರುವಾಗಲಿದೆ.
 
ಆದರೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು, ಯಾವೆಲ್ಲಾ ನೀತಿ ನಿಯಮ ಪಾಲಿಸಬೇಕು ಎಂಬ ವಿಚಾರಗಳ ಬಗ್ಗೆ ಸದ್ಯದಲ್ಲೇ ತಿಳಿಸುವುದಾಗಿ ಸಚಿವರು ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :