ನವದೆಹಲಿ: ಮನೆಯಲ್ಲಿ ಕಳ್ಳತನವಾಗಿದೆಯೆಂದು ಮನೆ ಮಾಲಿಕರು ಮಾಂತ್ರಿಕನನ್ನು ಕರೆಸಿ ಮನೆಗೆಲಸದ ಮಹಿಳೆಗೆ ಚಿತ್ರಹಿಂಸೆ ನೀಡಿದ ಘಟನೆ ದೆಹಲಿಯಲ್ಲಿ ನಡೆದಿದೆ.ಮನೆ ಮಾಲಿಕರ ಚಿನ್ನಾಭರಣ ಕಳ್ಳತನವಾಗಿತ್ತು. ಮಾಲಿಕರಿಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ನೌಕರರ ಮೇಲೆ ಅನುಮಾನ. ಈ ಸಂಬಂಧ ಮಾಲಿಕರು ಮನೆಗೆ ಮಾಂತ್ರಿಕನನ್ನು ಕರೆಸಿದ್ದರು.ಮಾಂತ್ರಿಕ ಮೂವರು ಮನೆಗೆಲಸದವರಿಗೆ ಬಾಯಿಗೆ ಅಕ್ಕಿ, ಕಲ್ಲು ತುರುಕಿ ಈಗ ಬಾಯಿ ಕೆಂಪಗಾದರೆ ಆಕೆಯೇ ಕಳ್ಳಿ ಎಂದಿದ್ದ. ಅದರಂತೆ ಸಂತ್ರಸ್ತ ಮಹಿಳೆಯ ಬಾಯಿ ಕೆಂಪಾಗಿತ್ತು. ಹೀಗಾಗಿ ಮಹಿಳೆಯ