ಜಾರ್ಖಂಡ್ : ಹೋಳಿ ಆಚರಣೆಯ ವೇಳೆ ನನ್ನ ಮೇಲೆ ಬಣ್ಣ ಎರಚಬೇಡಿ ಎಂದ ವೃದ್ಧೆಯನ್ನು ಯುವಕರ ಗುಂಪೊಂದು ಥಳಿಸಿ ಕೊಲೆಗೈದ ಘಟನೆ ಜಾರ್ಖಂಡ್ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ. ಮೃತಳನ್ನು ಮುಟ್ಟಿ ದೇವಿ ಎಂದು ಗುರುತಿಸಲಾಗಿದೆ. ಬಲಬದ್ಧಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 65 ವರ್ಷದ ವೃದ್ಧೆಯನ್ನು ಪಾನಮತ್ತ ಯುವಕರ ಗುಂಪು ಹತ್ಯೆ ಮಾಡಿದೆ.ಹೋಳಿ ಬಣ್ಣದಾಟದ ಸಮಯದಲ್ಲಿ ಕೆಲವೊಮ್ಮೆ ಬಲವಂತವಾಗಿ ಬಣ್ಣ ಎರಚಲಾಗುತ್ತದೆ.