ಲಕ್ನೋ: ತಪ್ಪು ಮಾಡಿದವರಿಗೆ ಜೈಲು ಶಿಕ್ಷೆ ಗ್ಯಾರಂಟಿ. ಅದು ನಮ್ಮ ದೇಶದ ಕಾನೂನು. ಆದರೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಜೈಲಿಗೆ ಹೋದವರು ಮನುಷ್ಯರಲ್ಲ! ಕತ್ತೆಗಳು! ಹೌದು ನಾಲ್ಕು ಕತ್ತೆಗಳು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಹೊರಬಂದಿವೆ! ಇದನ್ನು ಕಾನೂನಿನ ವ್ಯಂಗ್ಯವೆನ್ನಬೇಕೋ, ನಗಬೇಕೋ, ಅಳಬೇಕೋ ನೀವೇ ಹೇಳಬೇಕು.ಅಷ್ಟಕ್ಕೂ ಈ ಕತ್ತೆಗಳು ಮಾಡಿದ ತಪ್ಪೇನು ಗೊತ್ತಾ? ಜೈಲಿನ ಕೌಂಪೌಂಡ್ ಹೊರಗೆ ಇದ್ದ ಬೆಲೆ ಬಾಳುವ ಬೆಳೆಯನ್ನು ತಿಂದು ನಾಶ ಮಾಡಿವೆ.