ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಅವರನ್ನು ಬಿಜೆಪಿ ಘೋಷಿಸಿದ ಬೆನ್ನಲ್ಲೇ ಅವರಿಗೆ ಝೆಡ್ ಭದ್ರತೆ ಒದಗಿಸಲಾಗಿದೆ. ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆದಿವಾಸಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಘೋಷಿಸಿದ 24 ಗಂಟೆ ಕಳೆಯುವ ಮುನ್ನವೇ ಅವರಿಗೆ ಸಿಎಆರ್ ಪಿಎಫ್ ಜೆಡ್ ಭದ್ರತೆ ನೀಡಲಾಗಿದೆ. ಆದರೆ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಯಾವುದೇ ಭದ್ರತೆ ನೀಡಲಾಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮಂಗಳವಾರ ದ್ರೌಪದಿ ಮುರ್ಮ