ನವದೆಹಲಿ : ದೇಶದಲ್ಲಿ ಡ್ರೋನ್ಗಳನ್ನು ಚಲಾಯಿಸಲು ಡ್ರೋನ್ ಪೈಲಟ್ ಪರವಾನಗಿ ಅಗತ್ಯವನ್ನು ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ರದ್ದುಗೊಳಿಸಿದೆ.ಡಿಜಿಸಿಎ-ಅನುಮೋದಿತ ಡ್ರೋನ್ ಶಾಲೆಯಿಂದ ಸಿಂಗಲ್ ವಿಂಡೋ ಡಿಜಿಟಲ್ ಸ್ಕೈ ಪ್ಲಾಟ್ಫಾರ್ಮ್ ಮೂಲಕ ನೀಡಲಾದ ರಿಮೋಟ್ ಪೈಲಟ್ ಪ್ರಮಾಣಪತ್ರ ಭಾರತದಲ್ಲಿ ಡ್ರೋನ್ ಕಾರ್ಯನಿರ್ವಹಿಸಲು ಸಾಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ವಾಣಿಜ್ಯೇತರ ಉದ್ದೇಶಗಳಿಗಾಗಿ 2 ಕೆಜಿ ವರೆಗಿನ ಡ್ರೋನನ್ನು ನಿರ್ವಹಿಸಲು ಯಾವುದೇ ರಿಮೋಟ್ ಪೈಲಟ್ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಗ್ಯಾಜೆಟ್ 360