ಮದುವೆ ಮಾಡಿಸಿಲ್ಲವೆಂದು ಕೋಪಗೊಂಡು ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ಮಗನೇ ಜೀವಂತವಾಗಿ ದಹಿಸಿದ ಅಮಾನವೀಯ ಘಟನೆ ತಮಿಳುನಾಡಿನ ಅರುಮ್ಬಾಕಮ್ನಲ್ಲಿ ಭಾನುವಾರ ನಡೆದಿದೆ. ಮೃತಳನ್ನು 63 ವರ್ಷದ ಡಿ. ಶಶಿಕಲಾ ಎಂದು ಗುರುತಿಸಲಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿ ಡಿ. ಅಮರನಾಥ್ ಪ್ರಸಾದ್ನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆತ ತಾಯಿಯನ್ನು ಕುರ್ಚಿಗೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ತನ್ನ ತಪ್ಪಾತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.