ಮುಂಬೈ: ನಾಗ್ಪುರ ಮುಂಬೈ ದುರಂತೊ ಎಕ್ಸ್ ಪ್ರೆಸ್ ರೈಲು ಇಂದು ಬೆಳಿಗ್ಗೆ ತಿತ್ ವಾಲಾ ಬಳಿ ಹಳಿ ತಪ್ಪಿದ ಘಟನೆ ನಡೆದಿದೆ. ಆದರೆ ಯಾವುದೇ ಅಪಾಯಗಳಾಗಿಲ್ಲ. ದುರಂತೊ ಎಕ್ಸ್ ಪ್ರೆಸ್ ಎಸಿ ಕೋಚ್ ನ ಐದು ಬೋಗಿಗಳು ಹಳಿ ತಪ್ಪಿರುವುದಾಗಿ ರೈಲ್ವೇ ಮೂಲಗಳು ಹೇಳಿವೆ. ಇದುವರೆಗೆ ಗಾಯಗಳಾದ ವರದಿಯಾಗಿಲ್ಲ.ಹಾಗಿದ್ದರೂ ಸ್ಥಳಕ್ಕೆ ವೈದ್ಯರ ತಂಡ ರವಾನಿಸಲಾಗಿದೆ. ಪ್ರಯಾಣಿಕರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೇ ಮೂಲಗಳು ಹೇಳಿವೆ.