ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಟ್ಟುಕೊಂಡು ಎಲೆಕ್ಟ್ರಾನಿಕ್ ಜಾಹೀರಾತಿನಲ್ಲಿ ಪಪ್ಪು ಪದವನ್ನು ಬಳಸದಂತೆ ಚುನಾವಣಾ ಆಯೋಗ ಗುಜರಾತ್ ಬಿಜೆಪಿ ಘಟಕಕ್ಕೆ ಆದೇಶಿಸಿದೆ. ಇದೊಂದು ಅವಹೇಳನಕಾರಿ ಎಂದು ಅಭಿಪ್ರಾಯಪಟ್ಟಿದೆ. ಈ ಬೆಳವಣಿಗೆಯನ್ನು ದೃಢೀಕರಿಸಿದ ಬಿಜೆಪಿ ಮೂಲಗಳು, ಜಾಹೀರಾತಿನ ಸ್ಕ್ರಿಪ್ಟ್ ಯಾವುದೇ ವ್ಯಕ್ತಿಗೆ ಪದವನ್ನು ಲಿಂಕ್ ಮಾಡಿಲ್ಲವೆಂದು ಹೇಳಿದೆ. ಬಿಜೆಪಿ ಮೂಲಗಳ ಪ್ರಕಾರ, ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನೇತೃತ್ವದ ಮಾಧ್ಯಮ ಸಮಿತಿಯು ಕಳೆದ ತಿಂಗಳು ಅನುಮೋದನೆಗಾಗಿ ಪಕ್ಷ