ದೇಶದ 16 ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ 2300 ಬೇನಾಮಿ ಕಂಪೆನಿಗಳನ್ನು ಪತ್ತೆ ಹಚ್ಚಿದ್ದಾರೆ. ಅದರಲ್ಲಿ ಒಬ್ಬನ ಹೆಸರಲ್ಲಿ 700 ಬೇನಾಮಿ ಕಂಪೆನಿಗಳಿರುವುದು ಆಘಾತಕ್ಕೆ ಕಾರಣವಾಗಿದೆ. ಒಬ್ಬ ವ್ಯಕ್ತಿಯ ಹೆಸರಲ್ಲಿ 700 ಬೇನಾಮಿ ಕಂಪೆನಿಗಳು ಪತ್ತೆಯಾಗಿದ್ದು, ಅಚ್ಚರಿಯ ವಿಷಯವೆಂದರೆ 700 ಬೇನಾಮಿ ಕಂಪೆನಿಗಳು ಒಂದೇ ವಿಳಾಸವನ್ನು ಹೊಂದಿರುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಎನ್ಸಿಪಿ ಮುಖಂಡ ಛಗನ್ ಭುಜಬಲ್