ಭಾವಿ ಪ್ರಧಾನಿಗೆ ಹಾಲಿ ಪ್ರಧಾನಿ ಮನಮೋಹನ್ ಅಭಿನಂದನೆ

ನವದೆಹಲಿ| Jaya| Last Updated: ಶುಕ್ರವಾರ, 16 ಮೇ 2014 (17:32 IST)
ಅಪ್ರತಿಮ ಗೆಲುವು ದಾಖಲಿಸಿ ಭಾರತದ ಮುಂದಿನ ಪ್ರಧಾನಿ ಹುದ್ದೆಗೆ ದಾಪುಗಾಲಿಟ್ಟಿರುವ ಹಾಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಪ್ರಧಾನಿ ಮನಮೋಹನ್ ಸಿಂಗ್ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಿಂಗ್ ಅವರ ಕಚೇರಿ ಟ್ವಿಟ್ ಮಾಡಿದೆ.
                                                                

ನಮೋ ಅಲೆಯಲ್ಲಿ ಕೊಚ್ಚಿ ಹೋಗಿರುವ ಕಾಂಗ್ರೆಸ್ ಮೌನವನ್ನು ಕಾಯ್ದುಕೊಂಡಿದ್ದು, ಮೋದಿ ಗುಜರಾತ್ ಗದ್ದಿಗೆಯನ್ನು ತ್ಯಜಿಸಿ, ಮನಮೋಹನ್ ಉತ್ತರಾಧಿಕಾರಿಯಾಗಿ ಗದ್ದಿಗೆಯನ್ನೇರುವುದು ಸಂಪೂರ್ಣ ಖಚಿತವಾಗಿದ್ದು ಪೂರ್ವಭಾವಿಯಾಗಿ ಸಿಂಗ್ ಅವರಿಗೆ ಕಂಗ್ರಾಟ್ಸ್ ಹೇಳಿದ್ದಾರೆ. 
 
ನಾಳೆ ರಾಷ್ಟ್ರಪತಿ ಪ್ರಣವ ಮುಖರ್ಜಿಯನ್ನು ಭೇಟಿಯಾಗಲಿರುವ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. 10 ವರ್ಷಗಳ ಕಾಲ ದೇಶವನ್ನಾಳಿದ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

LIVE Karnataka Lok Sabha 2014 Election Results
//elections.webdunia.com/karnataka-loksabha-election-results-2014.htm//elections.webdunia.com/karnataka-loksabha-election-results-2014.htm
 
LIVE Lok Sabha 2014 Election Results
ಇದರಲ್ಲಿ ಇನ್ನಷ್ಟು ಓದಿ :