ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಳ: ಬಿಜೆಪಿ ಮುಖಂಡ

ರಾಮಕೃಷ್ಣ ಪುರಾಣಿಕ 

ಮುಂಬೈ, ಶನಿವಾರ, 3 ಫೆಬ್ರವರಿ 2018 (13:29 IST)

ಯುಪಿ ಸಚಿವ ಓಂ ಪ್ರಕಾಶ್ ರಾಜ್‌ಭರ್ ಅವರು ಪ್ರಸ್ತುತ ವಿತರಣೆಯ ಅಡಿಯಲ್ಲಿ ಭ್ರಷ್ಟಾಚಾರವು ಹೆಚ್ಚಾಗಿದೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ.
ಆದಾಗ್ಯೂ, ಬಿಜೆಪಿ ವಕ್ತಾರರು, "ಅಗ್ಗದ ಪ್ರಚಾರವನ್ನು ಗಳಿಸುವ ಪ್ರಯತ್ನ" ಎಂದು ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ, ರಾಜ್‌ಭರ್ ಅವರು ಯಾವುದೇ ದೂರುಗಳನ್ನು ಹೊಂದಿದ್ದರೆ ಅವುಗಳನ್ನು ಅವರು ಸರಿಯಾದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಹೇಳಿದ್ದಾರೆ.
 
"ಹಿಂದಿನ ಎಸ್‌ಪಿ ಮತ್ತು ಬಿಎಸ್‌ಪಿ ಆಡಳಿತಗಳಿಗೆ ಹೋಲಿಸಿದರೆ ಬಿಜೆಪಿ ಆಡಳಿತದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ. ನಾನು ಈ ಸರ್ಕಾರದ ಭಾಗವಾಗಿದ್ದರೂ ಸಹ, ಇದು ನನ್ನ ಸರ್ಕಾರವಲ್ಲ... ಬಿಜೆಪಿಯೊಂದಿಗೆ ಮೈತ್ರಿ ಯಾಗಿದ್ದೇವೆ," ಎಂದು ರಾಜ್‌ಭರ್ ಹೇಳಿದ್ದಾರೆ.
 
ಬಿಜೆಪಿ ಮೈತ್ರಿಯ ಸುಹೆಲ್‌ದೇವ್ ಭಾರತೀಯ ಸಮಾಜ ಪಕ್ಷವನ್ನು (ಎಸ್‌ಬಿಎಸ್‌ಪಿ) ಮುನ್ನಡೆಸುವ ರಾಜ್‌ಭರ್, ಪ್ರಸ್ತುತ ಸರ್ಕಾದಲ್ಲಿ ಅವರ ಪಕ್ಷವು ಕನಿಷ್ಠ ಗೌರವವನ್ನು ಪಡೆಯುತ್ತಿಲ್ಲ. "ಈ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಯವರೊಂದಿಗೆ ನಾನು ಮಾತನಾಡಿದ್ದೇನೆ," ಎಂದು ಅವರು ಹೇಳಿದರು.
 
2019 ರ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷವು ಬಿಜೆಪಿಯೊಂದಿಗೆ ಸ್ಪರ್ಧೆ ಮಾಡುತ್ತದೆಯೇ ಎಂದು ಕೇಳಿದಾಗ, ರಾಜ್‌ಭರ್ ಅವರು ಅದು ಕೇಸರಿ ಪಕ್ಷದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
 
"ಅದು ನಮ್ಮೊಂದಿಗೆ ಮೈತ್ರಿ ಬಯಸುತ್ತದೆಯೇ ಅಥವಾ ಇಲ್ಲವೇ ಎಂಬುದು ಬಿಜೆಪಿಯ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ, ಸ್ಥಳೀಯ ಚುನಾವಣೆಗಳಂತೆ, ನಾವು ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದೇವೆ," ಎಂದು ಅವರು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಬೆದರಿಕೆ ಪತ್ರ; ಪತ್ರದಲ್ಲಿ ಏನಿದೆ ಗೊತ್ತಾ...?

ಧಾರವಾಡ : ಸಿ.ಟಿ.ರವಿ ಅವರ ನಂತರ ಮತ್ತೊಬ್ಬ ಬಿಜೆಪಿ ನಾಯಕರಾದ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ...

news

ಫೆಬ್ರವರಿ 4ರಂದು ಬೆಂಗಳೂರು ಬಂದ್ ಇಲ್ಲ; ವಾಟಾಳ್ ನಾಗರಾಜ್

ಬೆಂಗಳೂರು : ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಫೆ.4 ರಂದು ಬೆಂಗಳೂರು ಬಂದ್‍ಗೆ ...

news

ಕೊಲೆಯಾದ ಸಂತೋಷ ಮನೆಗೆ ಕೇಂದ್ರ ಸಚಿವ ಭೇಟಿ- ಕಣ್ಣೀರಿಟ್ಟ ಕುಟುಂಬ

ಕೊಲೆಯಾಗಿರುವ ಬಿಜೆಪಿ ಕಾರ್ಯಕರ್ತ ಸಂತೋಷ ನಿವಾಸಕ್ಕೆ ಕೆಂದ್ರ ಸಚಿವ ಅನಂತಕುಮಾರ ಹಾಗೂ ಬಿಜೆಪಿ ರಾಜ್ಯ ...

news

ನಟಿ ರಮ್ಯಾ ಇಡ್ಲಿ ಪ್ರೀತಿ ನೋಡಿ ನೀರೂರಿಸಿಕೊಂಡ ಹಿಂಬಾಲಕರು!

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ...