Widgets Magazine

ಜಿಎಸ್`ಟಿ ಎಂದರೆ ಬಿಜೆಪಿ ಸಚಿವರಿಗೇ ಗೊತ್ತಿಲ್ಲ.. ವೈರಲ್ ವಿಡಿಯೋ

ಲಖನೌ| venu| Last Modified ಶುಕ್ರವಾರ, 30 ಜೂನ್ 2017 (13:29 IST)
ಇಂದು ಮಧ್ಯರಾತ್ರಿಯಿಂದ ದೇಶದ ತೆರಿಗೆ ವ್ಯವಸ್ಥೆ ಬದಲಾಗಲಿದೆ. ಮಧ್ಯರಾತ್ರಿಯಿಂದ ಕೇಂದ್ರಸರ್ಕಾರದ ಸರೆಕು ಮತ್ತು ಸೇವಾ ತೆರಿಗೆ ಜಾರಿಗೆ ಬರಲಿದೆ. ಆದರೆ, ಈ ಜಿಎಸ್`ಟಿ ಬಗ್ಗೆ ದೇಶದ ಜನರಿಗಿರಲಿ ಸ್ವತಃ ಬಿಜೆಪಿ ಸಚಿವರಿಗೇ ಗೊತ್ತಿಲ್ಲ.

ಹೌದು, ಜಿಎಸ್`ಟಿ ವಿಸ್ತೃತ ರೂಪ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಪ್ರದೇಶದ ಬಿಜೆಪಿ ಸಚಿವರು ತಬ್ಬಿಬ್ಬಾದ ಘಟನೆ ನಡೆದಿದೆ. ಸಮಾಜ ಕಲ್ಯಾಣ ಸಚಿವ ರಾಮಪತಿ ಶಾಸ್ತ್ರೀಯ ಅಜ್ಞಾನ ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತಂತೆ ಮರುಪ್ರತಿಕ್ರಿಯಿಸಿರುವ ಸಚಿವ, ಜಿಎಸ್`ಟಿ ವಿಸ್ತೃತ ರೂಪ ನನಗೆ ಗೊತ್ತಿದೆ. ಕಡತಗಳನ್ನ ಪರಿಶೀಲಿಸಿ ಮತ್ತಷ್ಟು ಜ್ಞಾನ ಸಂಪಾದಿಸುವುದಾಗಿ ಹೇಳಿದ್ದಾರೆ.
 

 ಇದರಲ್ಲಿ ಇನ್ನಷ್ಟು ಓದಿ :