ನವದೆಹಲಿ: ಆ ಶ್ರೀರಾಮಚಂದ್ರನೇ ಬಂದರೂ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಸಾಧ್ಯವಾಗದು ಎಂದು ಬಿಜೆಪಿ ಸಂಸದ ಸುರೇಂದ್ರ ನಾರಾಯಣ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಇದನ್ನು ನಾನು ಧೈರ್ಯವಾಗಿ ಹೇಳಬಲ್ಲೆ. ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಆ ಭಗವಂತ ಶ್ರೀರಾಮನಿಗೂ ಸಾಧ್ಯವಿಲ್ಲ. ಇದು ಪ್ರಾಕೃತಿಕ ಅಂಟು ಖಾಯಿಲೆಯಂತಾಗಿದೆ ಎಂದು ಸಂಸದ ಸುರೇಂದ್ರ ಹೇಳಿದ್ದಾರೆ.ಇಂತಹ ಪ್ರಕರಣವನ್ನು ತಡೆಯಬೇಕಾದರೆ ಇನ್ನೊಬ್ಬರ ಕುಟುಂಬವನ್ನೂ ನಮ್ಮ ಕುಟುಂಬದಂತೆ ಗೌರವಿಸಲು ಜನರು ಕಲಿಯಬೇಕು. ಹಾಗಿದ್ದರೆ ಮಾತ್ರ ಅತ್ಯಾಚಾರ ಪ್ರಕರಣಗಳು