ಇನ್ಮುಂದೆ ದೇಶದ ಜನರಿಗೆಲ್ಲಾ ಇ ಪಾಸ್ ಪೋರ್ಟ್ ದೊರಕಲಿದೆ. ಇಂಥದ್ದೊಂದು ಯೋಜನೆಗೆ ಕೇಂದ್ರ ಸರಕಾರ ಮುಂದಾಗಿದ್ದು, ಪ್ರಾಯೋಗಿಕವಾಗಿ 20 ಸಾವಿರ ಇ ಪಾಸ್ ಪೋರ್ಟ್ ವಿತರಣೆ ಮಾಡಲಾಗಿದೆ.ಮುಂದಿನ ವರ್ಷ ಅಧಿಕೃತವಾಗಿ ಈ ಯೋಜನೆಯನ್ನು ಕೇಂದ್ರ ಕೈಗೆತ್ತಿಕೊಳ್ಳಲಿದೆ.ಇ ಪಾಸ್ ಪೋರ್ಟ್ ನಲ್ಲಿ ಮೈಕ್ರೋಪ್ರೊಸೆಸರ್ ಚಿಪ್ ಅಳವಡಿಸಲಾಗಿದ್ದು, ನಕಲಿಗೆ ಅವಕಾಶವೇ ಇಲ್ಲದಂತೆ ನೋಡಿಕೊಳ್ಳಲಾಗಿದೆ ಎನ್ನಲಾಗಿದೆ.