ನವದೆಹಲಿ : ಎರಡು ದಿನಗಳ ಹಿಂದೆಯಷ್ಟೇ ಸಿಬಿಐ ದಾಳಿಗೆ ಒಳಗಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್ ದಾಖಲಿಸಲಾದ ವ್ಯಕ್ತಿಗಳ ಪಟ್ಟಿಯಲ್ಲಿರುವ ಮನೀಶ್ ಸಿಸೋಡಿಯಾ ಹಾಗೂ ಇತರೆ 8 ಮಂದಿ ವಿರುದ್ಧ ಇಂದು ಲುಕ್ಔಟ್ ನೋಟಿಸ್ ಹೊರಡಿಸಿದೆ. ಜೊತೆಗೆ ಸಿಸೋಡಿಯಾ ವಿದೇಶ ಪ್ರಯಾಣ ಮಾಡದಂತೆ ಸಿಬಿಐ ನಿರ್ಬಂಧ ವಿಧಿಸಿದೆ. 8 ಖಾಸಗಿ ಆರೋಪಿಗಳ ವಿರುದ್ಧವಷ್ಟೇ ಲುಕ್ಔಟ್