ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮಿಯ ಬಳಗದಲ್ಲಿದ್ದ ಬಾಬಾ ರಾಮದೇವ್ ಇದೀಗ ಉಲ್ಟಾ ಹೊಡೆದಿದ್ದು, ನೋಟು ನಿಷೇಧದಲ್ಲಿ 3 ರಿಂದ 5 ಲಕ್ಷ ಕೋಟಿ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನೋಟು ನಿಷೇಧದಲ್ಲಿ 8 ಲಕ್ಷ ಕೋಟಿ ಅವ್ಯವಹಾರವಾಗಿದೆ ಎಂದು ಆರೋಪಿಸಿರುವ ಮಧ್ಯೆ, ಬಾಬಾ ರಾಮದೇವ್ ಕೂಡಾ ಆರೋಪ ಮಾಡಿರುವುದು ಬಿಜೆಪಿಗೆ ಆಘಾತ ತಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ