ಮೋದಿಯವರ ‘ಆ್ಯಕ್ಟ್ ಈಸ್ಟ್’ ಪಾಲಿಸಿ ಈಗ ಭಾರತದ ರಕ್ಷಣಾ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆಯನ್ನೇ ತೆರೆದಿದೆ. ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಇರುವ ಎಲ್ಲ ದೇಶಗಳಿಗೆ ಚೀನಾದಿಂದ ಅಭದ್ರತೆ ಕಾಡುತ್ತಿದೆ. ಅದನ್ನು ಸಮರ್ಥವಾಗಿ ಎದುರಿಸಲು ಅವುಗಳಿಗೆ ಸೂಕ್ತವಾದ ಶಸ್ತ್ರಾಸ್ತ್ರಗಳ ಅಭಾವ ಇದೆ.ಹೀಗಾಗಿ ಅವು ಭಾರತದ ಕಡೆ ಮುಖ ಮಾಡಿವೆ. ಇತ್ತೀಚೆಗೆ ಚೀನಾ ಫಿಲಿಪ್ಪೀನ್ಸ್ನ ಕಡಲ ತೀರದಲ್ಲಿ ಅದರ ಮೀನುಗಾರಿಕಾ ಹಡಗುಗಳಿಗೆ ತೊಂದರೆ ಕೊಟ್ಟಿತ್ತು. ಚೀನಾದ ಯುದ್ಧ ನೌಕೆಗಳನ್ನು ಸಮರ್ಥವಾಗಿ ಎದುರಿಸಲು