Widgets Magazine

ಭಾರತೀಯ ಬಳಕೆದಾರರಿಗಾಗಿ ಈ ಹೊಸ ಫೀಚರ್ ನೀಡಿದ ಫೇಸ್ ಬುಕ್

ನವದೆಹಲಿ| pavithra| Last Modified ಶುಕ್ರವಾರ, 22 ಮೇ 2020 (08:35 IST)

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ ಬುಕ್ ಭಾರತೀಯ ಬಳಕೆದಾರರಿಗಾಗಿ ಮಾತ್ರ ಒಂದು ವಿಶೇಷವಾದ ಪ್ರೊಫೈಲ್ ಲಾಕ್ ಫೀಚರ್ ನ್ನು ನೀಡಿದೆ.

 

ಈ ಫೀಚರ್ ಆಯ್ಕೆ ಮಾಡಿದ ಬಳಕೆದಾರನ ಪ್ರೊಪೈಲ್ ನಲ್ಲಿರುವ ಫೋಟೊಗಳು ಅವರ ಸ್ನೇಹಿತರಿಗೆ ಮಾತ್ರ ಕಾಣುತ್ತದೆ. ಬೇರೆ ಯಾರಿಗೂ ಫೋಟೊ ಹಾಗೂ ಪೋಸ್ಟ್ ಗಳು ಝೊಮ್ ಮಾಡಲು ಹಾಗೂ ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. ಫೇಸ್ ಬುಕ್ ಬಳಕೆಯಲ್ಲಿ ನಿಯಂತ್ರಣ ಇರಬೇಕೆಂದು ಬಯಸುವ ಮಹಿಳೆಯರಿಗಾಗಿ ಈ ಫೀಚರ್ ನೀಡಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.
 

ಈ ಲಾಕ್ ಮಾಡುವುದು ಹೇಗೆಂದರೆ: ನಿಮ್ಮ ಫೋಟೊದ ಮೇಲೆ ಒತ್ತಿದಾಗ ಲಾಕ್ ಪ್ರೊಫೈಲ್ ಆಯ್ಕೆ ಕಾಣುತ್ತದೆ. ಅದನ್ನು ಒತ್ತಿ ಕನ್ಫರ್ಮ್ ಮಾಡಿದ್ರೆ ಲಾಕ್ ಆಗುತ್ತದೆ. ಅದನ್ನು ತೆಗೆಯಬೇಕೆಂದರೆ ನಿಮ್ಮ ಪ್ರೊಫೈಲ್ ಗೆ ಹೋಗಿ ಅನ್ ಲಾಕ್ ಮಾಡಬೇಕಾಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :