ಗುರುಗೋವಿಂದ ಸಿಂಗ್ ಜಿ ಮಹಾರಾಜರ 350ನೇ ಜನ್ಮದಿನಾಚರಣೆ ಪ್ರಯುಕ್ತ ಪಾಟ್ಣಾದಲ್ಲಿಂದು ಆಯೋಜಿಸಲಾಗಿದ್ದ ಪ್ರಕಾಶ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಆಗಮಿಸುವ ಕೆಲ ಕ್ಷಣಗಳ ಮೊದಲು ಬಿಹಾರ ಪೊಲೀಸರು ನಕಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಆ ಸಮವಸ್ತ್ರಧಾರಿ ನಕಲಿ ಅಧಿಕಾರಿ ನಿರ್ದೇಶನಗಳನ್ನು ನೀಡುತ್ತಿದ್ದನೆನ್ನಲಾಗಿದೆ. ಈತನ ಬಗ್ಗೆ ಇತರ ಪೊಲೀಸರಿಗೆ ಅನುಮಾನ ಬಂದಿದ್ದು ತಕ್ಷಣ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಗುರುಗೋವಿಂದ ಸಿಂಗ್