ಹೈದರಾಬಾದ್ : 15 ವರ್ಷದ ಹುಡುಗಿಯ ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸುವ ನೆಪದಲ್ಲಿ ನಕಲಿ ಸಾಧುವೊಬ್ಬ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿ ಮಾಡಿದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿಯನ್ನು ಗುಣಪಡಿಸಲು ಪೋಷಕರು ಈ ನಕಲಿ ಸಾಧುವನ್ನು ಶಕ್ತಿಶಾಲಿ ಮಾಂತ್ರಿಕನೆಂದು ನಂಬಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆತ ಧ್ಯಾನದ ಕೋಣೆಗೆ ಹುಡುಗಿಯನ್ನು ಕರೆದುಕೊಂಡು ಹೋಗಿ ಮಾದಕ ದ್ರವ್ಯ ನೀಡಿ ಆಕೆಯ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಹುಡುಗಿಗೆ ಹೊಟ್ಟೆನೋವು ಕಾಣಿಸಿಕೊಂಡ