ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದೆ. ಆದರೆ ಅವುಗಳನ್ನು ಸಂಸತ್ ಅಧಿವೇಶನದ ವೇಳೆ ಅಧಿಕೃತವಾಗಿ ವಾಪಸ್ ಪಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇನ್ನೂ ಬಗೆಹರಿದಿಲ್ಲ. ಜೊತೆಗೆ ಈ ಕಾನೂನುಗಳಿಗೆ ಬೇರೆ ಯಾವ ರೀತಿಯ ತಿದ್ದುಪಡಿಗಳನ್ನು ತರಲಿದೆಯೋ ಎಂಬ ಅನುಮಾನಗಳು ಬಗೆಹರಿದಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಉತ್ತರ ಪ್ರದೇಶದ ಲಖನೌದಲ್ಲಿ ಇಂದು ರೈತ ಮಹಾಪಂಚಾಯಿತಿ ಹಮ್ಮಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಕೃಷಿ ಕಾಯಿದೆ ಹೋರಾಟ ಮಾಡುತ್ತಾ