ಮಹಾರಾಷ್ಟ್ರದಲ್ಲಿ ಈರುಳ್ಳಿ ಸಗಟು ಮಾರಾಟ ಬೆಲೆ ನೆಲಕಚ್ಚಿದ್ದು, ಹರಾಜೊಂದರಲ್ಲಿ ರೈತನಿಗೆ ಒಂದು ಕೆ.ಜಿ ಈರುಳ್ಳಿಯನ್ನು ಐದು ಪೈಸೆಗೆ ಕೇಳಲಾಗಿದೆ. ಇದು ಸಗಟು ಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವ ದಯನೀಯ ಸ್ಥಿತಿಯನ್ನು ಜಾಹೀರುಗೊಳಿಸಿದೆ. ಈರುಳ್ಳಿಯ ಅತಿರಿಕ್ತ ಉತ್ಪಾದನೆಯಿಂದಾಗಿ ಕಳೆದ ಎರಡು ತಿಂಗಳಿಂದ ರೈತರ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಮಂಗಳವಾರ ಹರಾಜಿನಲ್ಲಿ ಪಾಲ್ಗೊಂಡಿದ್ದ ನನಗೆ ಒಂದು ಕಿಲೋಗೆ ಐದು ಪೈಸೆಯನ್ನು ಆಫರ್ ಮಾಡಲಾಯಿತು ಎಂದು ನಿಪಾಡ್ ತಾಲ್ಲೂಕಿನ ಸೈಖೇಡಾದ ರೈತ ಸುಧಾಕರ್ ದಾರದೆ ಅಳಲು ತೋಡಿಕೊಂಡಿದ್ದಾರೆ.