ಮದುವೆ ಮನೆಯಲ್ಲೂ ರೈತ ಪ್ರತಿಭಟನೆ!

ಲಕ್ನೋ| Krishnaveni K| Last Modified ಬುಧವಾರ, 10 ಫೆಬ್ರವರಿ 2021 (09:32 IST)
ಲಕ್ನೋ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಮಾಡುತ್ತಿರುವ ಪ್ರತಿಭಟನೆ ಈಗ ಮದುವೆ ಮನೆಗೂ ಕಾಲಿಟ್ಟಿದೆ. ಉತ್ತರ ಪ್ರದೇಶದಲ್ಲಿ ಮದುವೆ ಮನೆಯೊಂದರಲ್ಲಿ ರೈತ ಪ್ರತಿಭಟನೆ ಕೂಗು ಕೇಳಿಬಂದಿದೆ.

 
ಮದುವೆ ಮನೆಗೆ ಟ್ರ್ಯಾಕ್ಟರ್ ಮೂಲಕ ತನ್ನ ಬಂಧು ಬಳಗದವರೊಂದಿಗೆ ಬಂದ ವರ ಬಳಿಕ ಮದುವೆ ಮುಗಿಸಿ ಹೋಗುವಾಗ ತನ್ನ ವಧುವನ್ನೂ ಟ್ರ್ಯಾಕ್ಟರ್ ನಲ್ಲೇ ಕರೆದೊಯ್ದಿದ್ದಾನೆ. ಅಷ್ಟೇ ಅಲ್ಲದೆ, ಮದುವೆ ದಿಬ್ಬಣದಲ್ಲೂ ರೈತ ಹೋರಾಟದ ಪರವಾದ ಬ್ಯಾನರ್ ಗಳನ್ನು ಹೊತ್ತುಕೊಂಡಿದ್ದಾರೆ. ಈ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :