ನವದೆಹಲಿ : ಪಂಜಾಬ್ - ಹರಿಯಾಣಾ ಗಡಿಯಲ್ಲಿ 14,000 ಕ್ಕೂ ಹೆಚ್ಚು ಮಂದಿ ರೈತರು ಇಂದು ಒಗ್ಗೂಡುತ್ತಿದ್ದಾರೆ. ಜೊತೆಗೆ 1200 ಟ್ರಾಕ್ಟರ್ ಟ್ರಾಲಿಗಳು, 300 ಕಾರ್ ಗಳು ಹಾಗೂ 10 ಮಿನಿ ಬಸ್ ಗಳೂ ಸಹ ಇಂದು ದೆಹಲಿ ಚಲೋ ಯಾತ್ರೆಗೆ ಸಜ್ಜಾಗಿವೆ.ಕೇಂದ್ರ ಬಿಜೆಪಿ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪಾದಯಾತ್ರೆ ತೀವ್ರಸ್ವರೂಪ ಪಡೆಯುವ ಸಾಧ್ಯತೆಯಿದೆ.ಪ್ರತಿಯೊಂದು ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕೆನ್ನುವುದು ರೈತರ ಪ್ರಮುಖ ಬೇಡಿಕೆಯಾಗಿದೆ.