ತಂದೆ ಹಾಗೂ ಗೆಳೆಯನಿಂದ ಗರ್ಭಿಣಿಯಾದ ಯುವತಿ

ಥಾಣೆ| pavithra| Last Modified ಮಂಗಳವಾರ, 13 ಅಕ್ಟೋಬರ್ 2020 (09:30 IST)
ಥಾಣೆ : 17 ವರ್ಷದ ಹುಡುಗಿಯ ಮೇಲೆ ಆಕೆಯ ತಂದೆ ಹಾಗೂ ಗೆಳೆಯ ಮಾನಭಂಗ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಹುಡುಗಿಯ ತಂದೆಗೆ 51 ವರ್ಷ ವಯಸ್ಸಾಗಿದ್ದು,  ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಹಾಗೂ ಆಕೆಯ ಗೆಳೆಯ 21 ವರ್ಷ ವಯಸ್ಸಿನವನಾಗಿದ್ದು ಇಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 3 ದಿನಗಳ ಹಿಂದೆ ಥಾಣೆಯ ವಾಸಿಂದ್ ಪಟ್ಟಣದ ರಸ್ತೆ ಬದಿಯಲ್ಲಿ ಸತ್ತ ಭ್ರೂಣವೊಂದು ಪೊಲೀಸರಿಗೆ ಸಿಕ್ಕಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಭ್ರೂಣ ಸಂತ್ರಸ್ತೆಗೆ ಸಂಬಂಧಪಟ್ಟಿದ್ದು ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ವಿಚಾರಿಸಿದಾಗ  ತನ್ನ ತಂದೆ ಹಾಗೂ ಗೆಳೆಯ ಹಲವಾರು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ತಾನು ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದಾಳೆ.> > ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳ ಡಿಎನ್ ಎ ಪರೀಕ್ಷೆ ನಡೆಸಲಾಗುವುದು ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :