ಔರಂಗಾಬಾದ್ : 8 ವರ್ಷದ ಬಾಲಕನನ್ನು ಮಲತಾಯಿ ಹಾಗೂ ತಂದೆ ಸೇರಿ ಕೊಂದ ಘಟನೆ ಉಸ್ಮಾನಾಬಾದ್ ನಲ್ಲಿ ನಡೆದಿದೆ. ಬಾಲಕನ ತಾಯಿ ಬಿಟ್ಟು ಹೋದ ಕಾರಣ ತಂದೆ ಮತ್ತೊಂದು ಮದುವೆಯಾಗಿದ್ದಾನೆ. ಆಕೆಗೆ ಮಗುವಾದ ಹಿನ್ನಲೆಯಲ್ಲಿ ಬಾಲಕನನ್ನು ಅನಾಥಾಶ್ರಮಕ್ಕೆ ಕಳುಹಿಸುವಂತೆ ಪತಿ ಹೇಳುತ್ತಿದ್ದಳು. ಆದರೆ ಇದಕ್ಕೆ ಇಷ್ಟವಿರದ ತಂದೆ ಈ ವಿಚಾರಕ್ಕೆ ಪತ್ನಿಯ ಜೊತೆಗೆ ಜಗಳವಾಡುತ್ತಿದ್ದ. ಈ ಸಮಸ್ಯೆಯಿಂದ ಬೇಸತ್ತ ತಂದೆ ತನ್ನ ಮಗನ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.