ತನ್ನ ಪುತ್ರನೊಂದಿಗೆ ಯಾವುದೇ ಕಾರಣಕ್ಕೂ ಲೈಂಗಿಕ ಕ್ರಿಯೆ ನಡೆಸಬಾರದೆಂದು ಮಾವನೊಬ್ಬ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಸೊಸೆಗೆ ಭೂತ ಹಿಡಿದಿದೆ ಎಂದು ನಂಬಿದ ಮಾವನೊಬ್ಬ, ತನ್ನ ಪುತ್ರನೊಂದಿಗೆ ಲೈಂಗಿಕ ಕ್ರಿಯೆ ನಡೆಸದಂತೆ ಕಟ್ಟಪ್ಪಣೆ ಕೊಟ್ಟಿದ್ದಾನೆ. ಲೈಂಗಿಕ ಕ್ರಿಯೆ ನಡೆಸಿದರೆ ಭೂತ ತನ್ನ ಪುತ್ರನ ಮೈಯಲ್ಲಿ ಸೇರುತ್ತದೆ ಎಂದು ನಂಬಿದ್ದಾನಂತೆ. ಅಷ್ಟೇ ಅಲ್ಲ, ಸೊಸೆಗೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾನೆ. ಇದಕ್ಕೆ ಪತಿ ಹಾಗೂ ಅತ್ತೆ ಕೂಡ ಸಾಥ್ ನೀಡಿದ್ದಾರೆ ಎಂದು