ಅಜ್ಜಿಯ ಲವಲವಿಕೆಗೆ ಮನಸೋತ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಮಂಗಳವಾರ, 18 ಮೇ 2021 (12:39 IST)
ಬೆಂಗಳೂರು: ಅಜ್ಜಿಯೊಬ್ಬಳು ಆಟವಾಡುವ ವಿಡಿಯೋ ಒಂದನ್ನು ಪ್ರಕಟಿಸಿದ ಅಭಿಮಾನಿಗೆ ಕಿಚ್ಚ ಸುದೀಪ್  ಮನಸೋತು ಪ್ರತಿಕ್ರಿಯೆ ನೀಡಿದ್ದಾರೆ.  
> ಇಳಿವಯಸ್ಸಿನ ತನ್ನ ಅಜ್ಜಿ ಬಾಲ್ ಸ್ಟ್ರೈಕಿಂಗ್ ಮಾಡುವ ವಿಡಿಯೋವನ್ನು ಅಭಿಮಾನಿಯೊಬ್ಬರು ಪ್ರಕಟಿಸಿದ್ದರು. ಈ ಇಳಿವಯಸ್ಸಿನಲ್ಲೂ ಅಷ್ಟು ಉತ್ಸಾಹದಲ್ಲಿ ಸೀರೆ ಉಟ್ಟುಕೊಂಡು, ಮಾಸ್ಕ್ ಧರಿಸಿ ಅಜ್ಜಿ ಆಡುವುದನ್ನು ನೋಡಿದ ಕಿಚ್ಚ ಕ್ಲೀನ್ ಬೋಲ್ಡ್ ಆಗಿದ್ದಾರೆ.>   ‘ಇದು ಜೀವನದ ಪರಿಪೂರ್ಣತೆ ಎಂದರೆ, ಸಂತೋಷ ಎಂದರೆ ಇದು, ಶಕ್ತಿ ಎಂದರೆ ಇದು. ಇದುವೇ ನಮಗೆ ಮಾದರಿ. ಆಕೆಗೆ ಇನ್ನಷ್ಟು ಆಯುರಾರೋಗ್ಯ ಸಿಗಲಿ’ ಎಂದು ಸುದೀಪ್ ಮನತುಂಬಿ  ಹಾರೈಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :