ಚೆನ್ನೈ: ಮದುವೆ ಮಾಡಿಸುವ ವಿಚಾರದಲ್ಲಿ ತಂದೆಯೊಂದಿಗೆ ವಾಗ್ವಾದಕ್ಕಿಳಿದ ಪುತ್ರ ಕೊನೆಗೆ ಹೆಣವಾದ ಧಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ಶಿವಮಣಿ ಎಂಬ 30 ವರ್ಷದ ಯುವಕ ತಂದೆಯಿಂದಲೇ ಕೊಲೆಗೀಡಾದ ದುರ್ದೈವಿ. ಪಾನಮತ್ತರಾಗಿದ್ದ ತಂದೆ-ಮಗ ಮದುವೆ ವಿಚಾರದಲ್ಲಿ ವಾಗ್ವಾದ ನಡೆಸಿದ್ದರು.ಶಿವಮಣಿಗೆ ಇಬ್ಬರು ಸಹೋದರಿಯರಿದ್ದು ಅವರಿಬ್ಬರ ಮದುವೆಯಾಗಿತ್ತು. ಇದೀಗ ತನಗೆ ಮದುವೆ ಮಾಡಿಸುವ ವಿಚಾರದಲ್ಲಿ ಉದಾಸೀನ ತೋರುತ್ತಿದ್ದಾರೆಂದು ಎಂದು ತಂದೆಯೊಡನೆ ಶಿವಮಣಿ ವಾದಕ್ಕಿಳಿದಿದ್ದ. ಇದೇ ತಾರಕಕ್ಕೇರಿ ತಂದೆ ಮಗನಿಗೆ ಅಕಸ್ಮಾತ್ತಾಗಿ ಇರಿದಿದ್ದಾರೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ.