ಭೋಪಾಲ್: ಹದಿಹರೆಯದ ಪುತ್ರಿಯ ಮೇಲೆ ಪಾಪಿ ತಂದೆಯೊಬ್ಬ ಒಂದು ವರ್ಷಗಳ ಕಾಲ ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ ಘಟನೆ ಭೋಪಾಲ್ ನಲ್ಲಿ ನಡೆದಿದೆ. ವರ್ಷದ ಹಿಂದೆ ಮನೆಯಲ್ಲಿ ತಾಯಿಯಿಲ್ಲದ ವೇಳೆ ಪಾಪಿ ತಂದೆ ಮೊದಲ ಬಾರಿಗೆ ಮಗಳ ಶೀಲಕೆಡಿಸಿದ್ದ. ಇದಕ್ಕೆ ಆಕೆಯ ಕಿರಿಯ ಸಹೋದರನೂ ಸಾಕ್ಷಿಯಾಗಿದ್ದ.ಕೆಲವು ದಿನಗಳ ಬಳಿಕ ಸಂತ್ರಸ್ತೆ ಅಜ್ಜಿ ತೀರಿಕೊಂಡಿದ್ದರಿಂದ ಅಜ್ಜಿ ಮನೆ ಸೇರಿಕೊಂಡಿದ್ದಳು. ಇದೀಗ ಮತ್ತೆ ಅಲ್ಲಿಗೂ ಬಂದ ಆರೋಪಿ ಪಾನಮತ್ತನಾಗಿ ಮತ್ತೊಮ್ಮೆ ಮಾನಭಂಗ ಮಾಡಿದ್ದ.