ಸಾಲವನ್ನು ಮರುಪಾವತಿಸಲಾಗದೆ ತಂದೆ ಮಗಳನ್ನೇ ಮಾರಾಟ ಮಾಡೋದಾ?

ಮೀರತ್| pavithra| Last Modified ಶನಿವಾರ, 20 ಫೆಬ್ರವರಿ 2021 (12:08 IST)
ಮೀರತ್ : ಉತ್ತರ ಪ್ರದೇಶದ ಮೀರತ್ ನಲ್ಲಿ ಸಾಲವನ್ನು ಮರುಪಾವತಿಸಲು ವಿಫಲನಾದ ತಂದೆ ತನ್ನ ಮಗಳನ್ನು ಮಾಡಿದ ಘಟನೆ ನಡೆದಿದೆ.

ಟ್ರಕ್ ಚಾಲಕನಾದ ಆರೋಪಿ ತಂದೆ ವ್ಯಕ್ತಿಯೊಬ್ಬನಿಂದ 2ಲಕ್ಷ ರೂ ಪಡೆದಿದ್ದಾನೆ. ಆದರೆ ಅದನ್ನು ತೀರಿಸಲು ಸಾಧ್ಯವಾಗದ ಕಾರಣ ತನ್ನ ಮಗಳನ್ನು ಆತನಿಗೆ ನೀಡಿದ್ದಾನೆ. ಇದನ್ನು ತಡೆದ ಪತ್ನಿಗೆ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೇ ಸಂತ್ರಸ್ತೆ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಒಳಗಾದ ಬಳಿಕ  ಆತನಿಂದ ತಪ್ಪಿಸಿಕೊಂಡು ಬಂದು ತಾಯಿಯ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :