ಪಟಾಕಿಯಿಂದ ಸಜೀವ ದಹನವಾದ್ರು ಅಪ್ಪ-ಮಗ

ಚೆನ್ನೈ| Krishnaveni K| Last Modified ಶನಿವಾರ, 6 ನವೆಂಬರ್ 2021 (09:20 IST)
ಚೆನ್ನೈ: ಪಟಾಕಿ ದುರಂತಗಳ ಬಗ್ಗೆ ಪ್ರತೀ ವರ್ಷ ದೀಪಾವಳಿ ಸಂದರ್ಭದಲ್ಲಿ ವರದಿಯಾಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ದುರಂತದಲ್ಲಿ ಅಪ್ಪ-ಮಗ ಸಾವನ್ನಪ್ಪಿದ ಘಟನೆ ಪುದುಚೇರಿಯಲ್ಲಿ ನಡೆದಿದೆ.

ಪಟಾಕಿಗಳ ಕಟ್ಟನ್ನೇ ಹೊತ್ತು ಸ್ಕೂಟರ್ ನಲ್ಲಿ ತಂದೆ ಮತ್ತು ಏಳು ವರ್ಷದ ಪುತ್ರ ಸಂಚರಿಸುತ್ತಿದ್ದಾಗ ಪಟಾಕಿ ಸ್ಪೋಟಗೊಂಡು ಸ್ಥಳದಲ್ಲೇ ಧಾರುಣ ಸಾವನ್ನಪ್ಪಿದ್ದಾರೆ.


ತಂದೆ ಸ್ಕೂಟರ್ ಚಲಾಯಿಸುತ್ತಿದ್ದರೆ ಮಗ ಪಟಾಕಿ ಚೀಲದ ಮೇಲೇ ಕೂತಿದ್ದ ಎನ್ನಲಾಗಿದೆ. ಇಡೀ ಸ್ಕೂಟರ್ ಜೊತೆಗೆ ತಂದೆ-ಮಗನೂ ಜೀವಂತ ದಹನವಾಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :