ಗಾಂಧಿನಗರ : ಮದುವೆ ಎಂದ ಮೇಲೆ ವಧು-ವರ ಇಬ್ಬರು ಇರಲೇಬೇಕು. ಆದರೆ ಗುಜರಾತಿನ ಗಾಂಧಿನಗರದಲ್ಲಿ ತಂದೆಯೊಬ್ಬರು ತನ್ನ 27 ವರ್ಷದ ಮಗನ ಮದುವೆಯನ್ನು ವಧುವಿಲ್ಲದೆ ಅದ್ಧೂರಿಯಾಗಿ ಮಾಡಿಸಿದ್ದಾರೆ. ಅಜಯ್ ಬಾರೋಟ್ ವಧುವಿಲ್ಲದೆ ಮದುವೆ ಮಾಡಿಕೊಂಡ ಯುವಕ. ಈತ ಚಿಕ್ಕ ಮಗುವಾಗಿರುವಾಗಲೇ ಆತನ ತಂದೆತಾಯಿ ಮುಂದೆ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದರು. ಆತನು ಕೂಡ ದೊಡ್ಡವನಾಗುತ್ತಲೇ ತಾನು ಅದ್ದೂರಿಯಾಗಿ ಮದುವೆಯಾಗಬೇಕೆಂದು ಕನಸು ಕಾಣುತ್ತಿದ್ದನು. ಆದರೆ ಆತ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ