ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವಿಮಾನ ಯಾನ ಹಾರಾಟಕ್ಕೆ ನಿಷೇಧ ಪಡೆದಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಕೊನೆಗೂ ತಮ್ಮ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದಾರೆ. ಇದರೊಂದಿಗೆ 14 ದಿನಗಳ ನಾಟಕ ಅಂತ್ಯವಾಗಿದ್ದು, ವಿಮಾನ ಹಾರಾಟಕ್ಕೆ ಅವರ ಮೇಲೆ ವಿಧಿಸಿದ್ದ ನಿರ್ಬಂಧ ವಾಪಸ್ ಪಡೆಯಲಾಗಿದೆ. ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿರಾಜುಗೆ ಕ್ಷಮಾಪಣಾ ಪತ್ರ ಬರೆದ ಗಾಯಕ್ವಾಡ್ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ. ಇದರೊಂದಿಗೆ ಕೇಂದ್ರ