ಕೊಲಂಬೋ : ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರಗತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇಂಧನ ಕೊರತೆಯೊಂದಿಗೂ ಹೋರಾಡುತ್ತಿದೆ.ಇದೀಗ ನಾಗರಿಕರಿಗೆ ಸಹಾಯ ಮಾಡಲು ಶ್ರೀಲಂಕಾದ ಮುಖ್ಯ ಬಂದರು ಪ್ರದೇಶದಲ್ಲಿ ಉಚಿತ ಬೈಸಿಕಲ್ ಸೇವೆಯನ್ನು ಅನಾವರಣಗೊಳಿಸಲಾಗಿದೆ.ಶ್ರೀಲಂಕಾದಲ್ಲಿ ನಗದು ಕೊರತೆಯಿರುವ ಕಾರಣ ಇತರ ದೇಶಗಳಿಂದ ತೈಲವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಇಂಧನ ಚಾಲಿತ ವಾಹನಗಳನ್ನೂ ಜನರಿಂದ ಬಳಸಲು ಸಾಧ್ಯವಾಗುತ್ತಿಲ್ಲ. ಇದೀಗ ದ್ವೀಪ ರಾಷ್ಟ್ರ ಇಂಧನದ ಅವಶ್ಯಕತೆ ಇಲ್ಲದ ಸೈಕಲ್ಗಳನ್ನು ಜನರಿಗೆ ಬಳಸಲು ಉತ್ತೇಜಿಸುತ್ತಿದೆ.ಡಾಲರ್ ಕೊರತೆಯಿರುವ