ಚುನಾವಣಾ ಪ್ರಚಾರದಲ್ಲಿ ಸಮಯದಲ್ಲಿ ಲಂಚ ಪಡೆದುಕೊಳ್ಳಿ ಎಂದು ಮತದಾರರಿಗೆ ಸಲಹೆ ನೀಡಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಗೋವಾದ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಮತದಾರರಿಗೆ ಆಮಿಷ ತೋರಿಸಿದ್ದಕ್ಕಾಗಿ ಕೇಜ್ರಿವಾಲ್ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೂಕ್ತ ವಿಭಾಗಗಳಡಿಯಲ್ಲಿ ದೂರು ದಾಖಲಿಸಬೇಕು. ದೆಹಲಿ ಸಿಎಂ ಮತ್ತು ಆಪ್ ಪ್ರಚಾರಕರಾಗಿ ಅವರು ಕಾನೂನಿಗೆ