ಕಾಬೂಲ್ : ಅಫ್ಘಾಸ್ತಾನದ ರಾಜಧಾನಿಯಲ್ಲಿರುವ ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಸ್ಫೋಟಗಳಿಂದ ಸಾವು ನೋವುಗಳಾಗಿದ್ದು, ಈ ದಾಳಿಯ ಹಿಂದೆ ಐಸಿಸ್ ಖೊರಾಸನ್ ಕೈವಾಡವಿದೆ ಎಂದು ಶಂಕಿಸಲಾಗಿದೆ.ಮೂಲಗಳ ವರದಿಯ ಪ್ರಕಾರ ಅಪರಿಚಿತ ಶಸ್ತ್ರಾಸ್ತ್ರಧಾರಿಯೊಬ್ಬ ಇಂದು ಮುಂಜಾನೆ ಗುರುದ್ವಾರಕ್ಕೆ ಪ್ರವೇಶಿಸಿದ್ದ ಎನ್ನಲಾಗಿದ್ದು, ಗುರುದ್ವಾರದಲ್ಲಿರುವವರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಗುರುದ್ವಾರದ ದಾಳಿಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಇದರ ಹೊರತಾಗಿ ಸಾವು-ನೋವುಗಳ ಬಗ್ಗೆ ಇನ್ನೂ ದೃಢೀಕೃತ