ನವದೆಹಲಿ: ನಾಲ್ವರು ಏಕಾಏಕಿ ಮನೆಯ ಎದುರು ಬಂದು ಇಟ್ಟಿಗೆಯಿಂದ ಕಿಟಿಕಿಯ ಗಾಜನ್ನು ಪುಡಿಗಟ್ಟಿದ್ದಾರೆ. ಬಳಿಕ ಪಿಸ್ತೂಲು ತೆಗೆದು ಎರಡು ಸುತ್ತು ಗುಂಡು ಹಾರಸಿದ್ದಾರೆ. ಕೈಯಲ್ಲಿ ಚಾಕುವಿನಂತಹ ಮಾರಕಾಸ್ತ್ರ ಹಿಡಿದು ಮನೆಯ ಒಳಗಿರುವವರಿಗೆ ಬೆದರಿಕೆ ಹಾಕಿರುವ ದೃಶ್ಯಗಳು ಕಂಡು ಬಂದಿವೆ. ದುಷ್ಕರ್ಮಿಗಳ ದಾಳಿಯ ದೃಶ್ಯಗಳು ಸಮೀಪದ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಕೆಲವು ದುಷ್ಕರ್ಮಿಗಳು ಮಧ್ಯರಾತ್ರಿ ಮನೆಯೊಂದರ ಮೇಲೆ ಇಟ್ಟಿಗೆ ಇಸೆದು ದಾಂಧಲೆ ನಡೆಸಿದ್ದಲ್ಲದೇ ಪಿಸ್ತೂಲಿನಿಂದ ಕೆಲವು ಸುತ್ತು ಗುಂಡು ಹಾರಿಸಿರುವ ಘಟನೆ ಮೋಹನ್