ನವದೆಹಲಿ : ಕೋವಿಡ್ ಹೊಡೆತದಿಂದ ಅತ್ಯಂತ ಕ್ಷಿಪ್ರಗತಿಯಲ್ಲಿ ಭಾರತದ ಆರ್ಥಿಕತೆ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶದ ಸಾರ್ವಭೌಮ ರೇಟಿಂಗ್ ಅನ್ನು ‘ಋುಣಾತ್ಮಕ’ದಿಂದ ‘ಸ್ಥಿರ’ಕ್ಕೆ ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ಏರಿಸಿದೆ. ಭಾರತದ ಆರ್ಥಿಕ ಪ್ರಗತಿ ಮಧ್ಯಮಾವಧಿಯಲ್ಲಿ ಕುಸಿಯುವಂತಹ ಸಾಧ್ಯತೆ ಕ್ಷೀಣವಾಗಿದೆ ಎಂದು ಬಣ್ಣಿಸಿದೆ.ಇದೇ ವೇಳೆ, 2022- 23ನೇ ವಿತ್ತೀಯ ವರ್ಷದಲ್ಲಿ ಭಾರತ ಶೇ.7.8ರ ದರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ ಎಂದೂ ಹೇಳಿದೆ. ಕಳೆದ ಮಾರ್ಚ್ ನಲ್ಲಿ ಶೇ.8.5ರ ಜಿಡಿಪಿ