ಪಾಟ್ನಾ: ಮದುವೆ ಸಮಾರಂಭಕ್ಕೆ ಹೋಗಿ ಬರುತ್ತಿದ್ದ ಕಾರು ನದಿಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಬಿಹಾರದ ನವೀನ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರೆಲ್ಲರೂ ಜಾರ್ಖಂಡ್ನ ಪಲಮು ನಿವಾಸಿಗಳು. ಅವರು ಟೋಲ್ ಪಂಚಾಯತ್ನ ಬಾಗಿ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಪಲಮು ಜಿಲ್ಲೆಯಲ್ಲಿರುವ ಛತ್ರಾಪುರ್ಗೆ ಕಾರಿನಲ್ಲಿ ಬರುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ