ಜೈಪುರ: ದೇವಸ್ಥಾನದ ಆಸ್ತಿ ಒಡೆತನಕ್ಕೆ ಸಂಬಂಧಿಸಿದಂತೆ ಪೂಜಾರಿಯೊಬ್ಬರನ್ನು ಐವರು ದುಷ್ಕರ್ಮಿಗಳು ಜೀವಂತ ದಹನ ಮಾಡಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ. ಬಾಬು ಲಾಲ್ ವೈಷ್ಣವ್ ಎಂಬಾತ ಸಾವನ್ನಪ್ಪಿದ ವ್ಯಕ್ತಿ. ಐವರು ಆರೋಪಿಗಳು ಪೂಜಾರಿ ಜತೆ ವಾಗ್ವಾದ ನಡೆಸಿ ಕೊನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರ ಗಾಯಗೊಂಡ ಬಾಬು ಲಾಲ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಗೆ ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ