ಮುಂಗಾರು ಮಾರುತಗಳು ದೇಶಾದ್ಯಂತ ವ್ಯಾಪಿಸಿವೆ. ಪರಿಣಾಮ ಹಲವು ರಾಜ್ಯಗಳಲ್ಲಿ ಕುಂಭದ್ರೋಣ ಮಳೆ ಆಗ್ತಿದೆ. ಪ್ರವಾಹ, ಮೇಘಸ್ಫೋಟ, ಭೂಕುಸಿತಗಳು ಉಂಟಾಗಿ ನಾನಾ ಅವಾಂತರಗಳು ಉಂಟಾಗ್ತಿವೆ.ಹಿಮಾಚಲಪ್ರದೇಶದ ಬಾಗಿಪುಲ್ನಲ್ಲಿ ದಿಢೀರ್ ಪ್ರವಾಹ ಉಂಟಾಗಿ 200 ಮಂದಿ ಅಪಾಯಕ್ಕೆ ಸಿಲುಕಿದ್ದಾರೆ. ಕುಲ್ಲು-ಮಂಡಿ ಹೈವೇಯಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ಸುಮಾರು 15 ಕಿಲೋಮೀಟರ್ನಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿವೆ. ಹಿಂದೆ ಹೋಗಲು ಆಗ್ತಿಲ್ಲ ಮುಂದೆ ಹೋಗಲು ದಾರಿ ಇಲ್ಲ. ಅಲ್ಲೆಲ್ಲೂ ಊಟ ವಸತಿಗಾಗಿ ಕನಿಷ್ಠ ಹೋಟೆಲ್ ಕೂಡ