ನವದೆಹಲಿ: ಸೋಮವಾರ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಬೇಕಿದ್ದ ಗೋ ಫಸ್ಟ್ ವಿಮಾನ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಟೇಕ್ ಆಫ್ ಆಗಿತ್ತು. ಇತ್ತೀಚೆಗೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ಹಲವು ತಪ್ಪುಗಳಿಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ ನೋಟಿಸ್ ಕಳುಹಿಸಿದೆ.ಒಂದಾದಮೇಲೊಂದರಂತೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ತಪ್ಪುಗಳಿಗೆ ಕಾರಣಗಳನ್ನು ನೀಡುವಂತೆ ಡಿಜಿಸಿಎ ನೋಟಿಸ್ ಕಳುಹಿಸಿದೆ. ಇದಕ್ಕೆ ಉತ್ತರಿಸಲು ಸಂಸ್ಥೆಗೆ 2 ವಾರಗಳ ಕಾಲಾವಕಾಶವನ್ನು ನೀಡಿದೆ.ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಗೋ