ಪಣಜಿ: ಉತ್ತರ ಗೋವಾದಲ್ಲಿರುವ ಅರಂಬೋಳ್ ರೆಸಾರ್ಟ್ನಲ್ಲಿ ರಷ್ಯಾ ಮೂಲದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಕರ್ನಾಟಕದ ಗದಗ ಜಿಲ್ಲೆ ಮಜ್ಜೂರ ತಾಂಡಾದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ. ಮೇ. 6ರಂದು ಈ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿದ್ದು, ಸಂತ್ರಸ್ತೆಯ ತಾಯಿ ಮೇ. 9ರಂದ ದೂರು ನೀಡಿದ್ದರು. ಮೇ 10ರಂದು ಪೆರ್ನೇಮ್ ಪೊಲೀಸರು ಆರೋಪಿ ರವಿ ಲಮಾಣಿ(28)ಯನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದಲ್ಲಿ ಬಂಧಿಸಿದ್ದಾರೆ.