ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ವಶದಲ್ಲಿರುವುದರಿಂದ ಭಾರತಕ್ಕೆ ಮರಳುವ ಸಾಧ್ಯತೆಗಳಿಲ್ಲ ಎಂದು ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಹತ್ಯೆಯಾಗಿ, 713 ಜನರಿಗೆ ಗಾಯಗಳಾಗಿದ್ದವು. ಒಟ್ಟು 27 ಕೋಟಿ ರೂಪಾಯಿ ಆಸ್ತಿ ನಷ್ಟವಾದ ಪ್ರಕರಣದಲ್ಲಿ ಪ್ರಮುಖ ರೂವಾರಿಯಾಗಿರುವ ಗ್ಯಾಂಗ್ಸ್ಟರ್ ದಾವೂದ್ ಸೆರೆಗೆ ಪೊಲೀಸರು ದಶಕಗಳಿಂದ ಯೋಜನೆಗಳನ್ನು ರೂಪಿಸಿದ್ದರು. ದಾವೂದ್ ಇಬ್ರಾಹಿಂ ಎಸಗಿದ ಅಪರಾಧಗಳನ್ನು