ದಾವೂದ್ ಇಬ್ರಾಹಿಂ ಜತೆ ಬಿಜೆಪಿ ಮಾಜಿ ಸಚಿವ ಏಕನಾಥ್ ಖಾಡ್ಸೆ ಲಿಂಕ್ ಹೊಂದಿರುವುದು ಇದೀಗ ಸಾಬೀತಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಅಂಜಲಿ ದಮಾನಿಯಾ ಹೇಳಿದ್ದಾರೆ. ಏಕನಾಥ್ ಖಾಡ್ಸೆ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಲ್ಲದೇ ದಾವುದ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅಂಜಲಿ ದಮಾನಿಯಾ ಆರೋಪಿಸಿದ್ದರು. ಇದರಿಂದಾಗಿ ಖಾಡ್ಸೆ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ನಿನ್ನೆ ರಾತ್ರಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಪಾಕಿಸ್ತಾನದಿಂದ ಕರೆ