ಪಾಟ್ನಾ : ಬಿಹಾರದ ಮಾಜಿ ಸಚಿವ ಸುಭಾಷ್ ಸಿಂಗ್(59) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಈ ಹಿಂದೆ ಸುಭಾಷ್ ಸಿಂಗ್ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಗಸ್ಟ್ 16ರ ಮಂಗಳವಾರ ಬೆಳಗ್ಗೆ 11:30ಕ್ಕೆ ನಿತೀಶ್-ತೇಜಸ್ವಿ ಸರ್ಕಾರದ ಸಂಪುಟ ವಿಸ್ತರಣೆ ನಡೆಯುವ ಮುನ್ನವೇ ಸುಭಾಷ್ ಸಿಂಗ್ ಕೊನೆಯುಸಿರೆಳೆದಿರುವ ಸುದ್ದಿ ತಿಳಿದು ಬಂದಿದೆ.