1996ರ ಗಾಜಿಯಾಬಾದ್`ನ ನಕಲಿ ಎನ್`ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಸಿಬಿಐ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇನ್ಸ್`ಪೆಕ್ಟರ್, ಸಬ್ ಇನ್ಸ್`ಪೆಕ್ಟರ್ ಮತ್ತು ಇಬ್ಬರು ಪೇದೆಗಳು ಶಿಕ್ಷೆಗೊಳಗಾಗಿದ್ದಾರೆ. ಸಾಕ್ಷ್ಯ ನಾಶ, ತಪ್ಪು ಸಾಕ್ಷ್ಯ ನೀಡಿಕೆ ಆರೋಪದಡಿ ನಾಲ್ವರೂ ದೋಷಿಗಳೆಂದು ಫೆಬ್ರವರಿ 20 ರಂದೇ ಕೋರ್ಟ್ ತೀರ್ಪು ನೀಡಿತ್ತು. ಇವತ್ತು ಶಿಕ್ಷೆ ಪ್ರಕಟಿಸಿದೆ. ನವೆಂಬರ್ 8 1996ರಂದು ಜಲಾಲುದ್ದೀನ್, ಜಸ್ಬೀರ್, ಅಶೋಕ್ ಮತ್ತು ಪ್ರವೇಜ್ ಎಂಬುವವರನ್ನ