ನವದೆಹಲಿ : ಗ್ರಾಹಕರಿಗೆ ನಿಗದಿತ ಸಮಯಕ್ಕೆ ಆಹಾರ ಪೂರೈಕೆ ಮಾಡದೇ ಆರ್ಡರ್ ರದ್ದಾದರೆ ದಂಡ ಪಾವತಿಸುವ ಜೊತೆಗೆ ಊಟವನ್ನೂ ಉಚಿತವಾಗಿ ನೀಡಬೇಕಾಗುತ್ತದೆ ಎಂದು ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್ಸಿಡಿಆರ್ಸಿ) ಜೊಮ್ಯಾಟೊ ಕಂಪನಿಗೆ ಆದೇಶಿಸಿದೆ. `ಸಕಾಲಕ್ಕೆ ಊಟ ಪೂರೈಕೆ ಇಲ್ಲವೇ ಉಚಿತ’ (ಆನ್ಟೈಮ್ ಆರ್ ಫ್ರೀ) ಆಯ್ಕೆಯಡಿ ಆಹಾರ ಪೂರೈಸದ ಕಾರಣಕ್ಕೆ ಗ್ರಾಹಕರೊಬ್ಬರಿಗೆ ಪರಿಹಾರ ರೂಪದಲ್ಲಿ 10 ಸಾವಿರ ರೂಪಾಯಿ ದಂಡ ಮತ್ತು ಉಚಿತ ಊಟ